ಪಪ್ಪಾಯಿ:-
ಪಪ್ಪಾಯಿಯಲ್ಲಿ
ವಿಟಾಮಿನ್ "ಎ" ಹಾಗೂ "ಸಿ"
ಯ ಕಣಜ. ಯುರ್ವೇದ
ತಜ್ಞರು ಪಪ್ಪಾಯಿಯನ್ನು ಹಲವು "ಮಹತ್ತರ ಗುಣಗಳ ಖಜಾನೆ"
ಎಂದು ವರ್ಣಿಸಿದ್ದಾರೆ. ಪಪ್ಪಾಯಿ ಬಹಳಷ್ಟು ಪೌಷ್ಟಿಕಾಂಶಗಳಿಂದ
ಕೂಡಿದೆ. ಪಪ್ಪಾಯಿಯಲ್ಲಿನ "ಪೆಪ್ಸಿನ್" ಎಂಬ ಅಂಶದಿಂದಾಗಿ ಇದರ
ಸೇವನೆಯಿಂದ ಬಹುಬೇಗ ಪಚನಗೊಳ್ಳುತ್ತದೆ. ಆದಷ್ಟು
ಪಕ್ವಗೊಂಡ ಹಣ್ಣನ್ನು ತಿನ್ನಬೇಕು. ಅದು ರುಚಿಕಾರಕ ಹಾಗೂ
ಪಿತ್ತನಾಶಕವಾಗಿದೆ. ಪಪ್ಪಾಯಿ ಮಾಗುತ್ತಾ ಹೋದಂತೆ
ಅದರಲ್ಲಿ ವಿಟಾಮಿನ್ಗಳು ಸಮೃದ್ಧಗೊಳ್ಳುತ್ತಾ ಹೋಗುತ್ತವೆ.
ಇದು ಹೊಟ್ಟೆ ರೋಗದಿಂದ ಬಳಲುತ್ತಿರುವವರಿಗೆ
ಬಹಳಷ್ಟು ಲಾಭ ಎನ್ನುತ್ತಾರೆ. ಲಿವರ್
ಸಮಸ್ಯೆ, ಅಜೀರ್ಣ, ರಕ್ತಹೀನತೆ, ಎದೆಹಾಲು
ವೃದ್ಧಿಸಲು, ತೂಕ ಹೆಚ್ಚಿಸುವ, ಜಂತುಗಳನ್ನು
ನಿವಾರಿಸಲು, ಮೂಲವ್ಯಾಧಿ ಮುಂತಾದವುಗಳನ್ನು ನಿವಾರಿಸಲು ಪಪ್ಪಾಯಿ ಔಷಧದಂತೆ ಕೆಲಸ
ಮಾಡುತ್ತದೆ. ಪಪ್ಪಾಯಿ ಆರೋಗ್ಯಕ್ಕೆ ಒಳ್ಳೆಯದಾದರೂ
ತುಂಬಾ ಉಷ್ಣ ಕಾರಣ ಸಾಮಾನ್ಯವಾಗಿ ಗರ್ಭಿಣಿಯರು ಇದನ್ನು ಸೇವಿಸಲು ಹಿಂಜರಿಯುತ್ತಾರೆ. ಪಪ್ಪಾಯಿಯಲ್ಲಿರುವ ಕಾರ್ಬೋಹೈಡ್ರೇಟ್ನಿಂದಾಗಿ ಶರೀರದಲ್ಲಿ ಉಷ್ಣತೆ
ಹೆಚ್ಚಾಗಿರುತ್ತದೆ. ಹಾಗೆಯೇ ಇದರಲ್ಲಿ ಕ್ಯಾಲ್ಶಿಯಂ
ಇರುವದರಿಂದ ಎಲುಬುಗಳು ಗಟ್ಟಿಗೊಳ್ಳುತ್ತವೆ.
ಹಲ್ಲು ನೋವಿಗೆ
ಪರಿಹಾರ
:-
ಪೊಟ್ಯಾಷಿಯಂ
ಪರ್ಮಾಂಗನೇಟ್(ಪಟಗಾ) ಒಂದು ಹಳಕನ್ನು
ಹಂಚಿನಲ್ಲಿ ಹಾಕಿ ಕಾಯಿಸಿ ಪುಡಿ
ಮಾಡಿ ಹಲ್ಲಿನಪುಡಿಯಲ್ಲಿ ಸೇರಿಸಿ ಹಲ್ಲನ್ನು
ತಿಕ್ಕಲು ಬಳಸಬಹುದು ಹಾಗೂ ಒಂದು ಲೋಟ
ಅಥವಾ ತಂಬಿಗೆ ನೀರಿಗೆ ಹಾಕಿ
ಮುಕ್ಕಳಿಸಿದರೆ ಹಲ್ಲಿನ ನೋವು ಪರಿಹಾರಾಗುವದಲ್ಲದೇ,
ಹಲ್ಲು ಗಟ್ಟಿಯಾಗಿರುತ್ತವೆ.
ಮುಟ್ಟು ಸರಿ
ಹೋಗಲು
:-
ಕೆಲವು ಹೆಣ್ಣುಮಕ್ಕಳಿಗೆ ಪ್ರತಿ
ತಿಂಗಳು ಮುಟ್ಟಾಗದೆ ತಿಂಗಳು ಬಿಟ್ಟು ತಿಂಗಳು
ಅಥವಾ ಲೇಟಾಗುತ್ತಿರುತ್ತದೆ. ಈ ಸಮಸ್ಯೆಗೆ ಪರಿಹಾರ
ಇಲ್ಲಿದೆ - ಚಿಕ್ಕ ಲೋಟ ಹುರುಳಿಯನ್ನು
ಕುದಿಸಿ ಅದರ ಕಟ್ಟನ್ನು ಪ್ರತಿನಿತ್ಯ
ಸೇವಿಸಿದರೆ ಮುಟ್ಟು ಸರಿಯಾಗಿ ಆಗುತ್ತದಲ್ಲದೆ
ಹೊಟ್ಟೆನೋವು ಹೋಗುತ್ತದೆ. ಹುರುಳಿ ಕಟ್ಟು ಹಾಗೆ
ಕುಡಿಯಲು ರುಚಿಸದಿದ್ದರೆ ನಿಂಬೆಹಣ್ಣಿನ ರಸ ಹಾಗೂ ಉಪ್ಪನ್ನು
ಸೇರಿಸಿ ಅಥವಾ ಸಾರಿನ ತರಹ
ಮಾಡಿಕೊಂಡು ಕುಡಿಯಿರಿ. ಹೆರಿಗೆಯಾಗಿ ಬಾಣಂತನದ ನಂತರ ಕೆಲವರಿಗೆ
ಹೊಟ್ಟೆ ಉಳಿಯುತ್ತದೆ. ಅದಕ್ಕೆ ಬಾಣಂತಿಯರು 4 ವಾರ
ಹುರುಳಿಕಾಳಿನ ಸಾರು, ಪಲ್ಯವನ್ನು ತಿಂದರೆ ಹೊಟ್ಟೆ ಬಾರದ ಹಾಗೆ ತಡೆಯಬಹುದೆಂದು ಹಿರಿಯರು
ಹೇಳುತ್ತಾರೆ.
ಸಾಮಾನ್ಯ ಹೊಟ್ಟೆ
ನೋವಿಗೆ
:-
ರಾತ್ರಿ ಊಟದ ನಂತರ ಒಂದು ಲೋಟ ಹಾಲಿಗೆ ಸ್ವಲ್ಪ ಬೆಲ್ಲ ಹಾಕಿ ಕುಡಿಯಬೇಕು. ಇದನ್ನು
ವಾರದವರೆಗೆ ಅನುಸರಿಸುವದರಿಂದ ಫಲಿತಾಂಶವನ್ನು ಕಂಡುಕೊಳ್ಳಬಹುದು. ಹಾಗೆ ಬೆಲ್ಲದ ತುಂಡನ್ನು ಪ್ರತಿನಿತ್ಯ ರಾತ್ರಿ
ಮಲಗುವ ಮುನ್ನ ತಿನ್ನುವ ಅಭ್ಯಾಸವನ್ನಿಟ್ಟುಕೊಳ್ಳುವದರಿಂದ ಪಿತ್ತ ಹಾಗೂ ತಲೆನೋವು ಬರದಂತೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ವಾರದವರೆಗೆ ಅನುಸರಿಸುವದರಿಂದ ಫಲಿತಾಂಶವನ್ನು ಕಂಡುಕೊಳ್ಳಬಹುದು. ಹಾಗೆ ಬೆಲ್ಲದ ತುಂಡನ್ನು ಪ್ರತಿನಿತ್ಯ ರಾತ್ರಿ
-ಸುಮಾ ಸಂಜೀವ ಕೆ