ಗಜ್ಜರಿ ಹಲ್ವಾ
ಬೇಕಾಗುವ ಸಾಮಾಗ್ರಿಗಳು:-     
  1/2 ಕೀಲೋ ಗಜ್ಜರಿ

·          1/2 ಲೀಟರ್ ಹಾಲು
·           1/2 ಕೀಲೋ ಸಕ್ಕರೆ
·           4 ಟೇಬಲ್ ಸ್ಪೂನ್ ತುಪ್ಪ
·           4 ಯಾಲಕ್ಕಿ
·           ಗೋಡಂಬಿ, ದ್ರಾಕ್ಷಿ

ಮಾಡುವ ವಿಧಾನ :-
ಗಜ್ಜರಿಯನ್ನು ತೊಳೆದು ಹೆರೆದುಕೊಳ್ಳಬೇಕು. ಹೆರಕಲಿಗೆ 2 ಟೇಬಲ್ ಸ್ಪೂನ್ ತುಪ್ಪ ಹಾಕಿ 5 ನಿಮಿಷ ಹುರಿಯಬೇಕು. ಆದರಲ್ಲಿ ಹಾಲು ಹಾಕಿ ಕುದಿಸಬೇಕು. ಗಜ್ಜರಿ ಮೃದುವಾದೊಡನೆ ಸಕ್ಕರೆ, ತುಪ್ಪ ಹಾಕಿ ಕುದಿಸಬೇಕು. ಗಟ್ಟಿಯಾದೊಡನೆ ಸಕ್ಕರೆ, ತುಪ್ಪ ಹಾಕಿ ಗಟ್ಟಿಯಾಗುವವರೆಗೆ ಕುದಿಸಬೇಕು. ಗಟ್ಟಿಯಾದೊಡನೆ ತಟ್ಟೆಗೆ ತುಪ್ಪ ಹಚ್ಚಿ ಹಾಕಬೇಕು. ಮೇಲೆ ಯಾಲಕ್ಕಿ ಪುಡಿ, ದ್ರಾಕ್ಷಿ, ಗೋಡಂಬಿ ತುಂಡು ಹಾಕಿ ತಟ್ಟಬೇಕು. ತಣ್ಣಗಾದ ಮೇಲೆ ನಮಗೆ ಬೇಕಾದ ಆಕಾರದಲ್ಲಿ ಕೊರೆದು ತೆಗೆಯಬೇಕು. ಸವಿಯಲು ರುಚಿ ಹಾಗೆ ಆರೋಗ್ಯಕ್ಕೂ ಉತ್ತಮ.

ಗಜ್ಜರಿ ಖೀರು
ಗಜ್ಜರಿ ಖೀರನ್ನು ಮಾಡಲು ಬೇಕಾಗುವ  ಪದಾರ್ಥಗಳು:-
2 ಗಜ್ಜರಿ, 4 ಕಪ್ ಹಾಲು ,1 ಕಪ್ ಸಕ್ಕರೆ,  ಏಲಕ್ಕಿ ಹಾಗೂ ತುಪ್ಪ 
ತಯಾರಿಸುವ ವಿಧಾನ:-  
ಗಜ್ಜರಿಯನ್ನು ತೊಳೆದು ಹೆರೆಯಬೇಕು. ಹಾಲನ್ನು ಕುದಿಯಲು ಇಡಬೇಕು. ಗಜ್ಜರಿಯ ಹೆರೆದ ತುರಿಗೆ ಸ್ವಲ್ಪ ತುಪ್ಪ ಹಾಕಿ ಹುರಿದು, ಕುದಿಯುವ ಹಾಲಿಗೆ ಹಾಕಬೇಕು. ಗಜ್ಜರಿ ಬೆಂದು ಮೃದುವಾದ ಮೇಲೆ ಕೆಳಗಿಳಿಸಬೇಕು. ಸಕ್ಕರೆ, ಯಾಲಕ್ಕಿಪುಡಿ, ಹಾಕಿ ಸೌಟಿನಿಂದ ತಿರುವಬೇಕು. ಶಕ್ತಿದಾಯಕವಾದ ಖೀರು ರುಚಿಕರವಾಗಿರುತ್ತದೆ
                                                                                
                                                                                         ಸುಮಾ ಸಂಜೀವ ಕೆ