ಜೋಳದ ಬಿಸ್ಕತ್

ಸಾಮಗ್ರಿಗಳು
ಗೋಧಿಹಿಟ್ಟು 1 ಬಟ್ಟಲು, ಜೋಳದಹಿಟ್ಟು 1 ಬಟ್ಟಲು, ತುಪ್ಪ1/2 ಬಟ್ಟಲು, ಸಕ್ಕರೆ 1 ಬಟ್ಟಲು, ಎಣ್ಣೆ 1/4 ಬಟ್ಟಲು, ನೀರು 1-2 ಬಟ್ಟಲು
ಮಾಡುವ ವಿಧಾನ
·         ಮೊದಲು  ಜೊಳದಹಿಟ್ಟು ಮತ್ತು ಗೋಧಿಹಿಟ್ಟನ್ನು ಚೆನ್ನಾಗಿ ಸೇರಿಸಿ.
·         ಎರಡು ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿ ಅದಕ್ಕೆ ಕಾಯಿಸಿದ ತುಪ್ಪವನ್ನು ಬೆರೆಸಿ.
·         ಎಣ್ಣೆ ಹಾಕಿ ಚೆನ್ನಾಗಿ ಕಲಿಸಿ, ಹಾಗೂ ನೀರನ್ನು ಸೇರಿಸಿ ಗಟ್ಟಿಯಾಗಿ ಕಲಿಸಿ ಚಪಾತಿ ಹಿಟ್ಟಿನ ತರಹ ಮಾಡಬೇಕು.
·         ಹಿಟ್ಟನ್ನು ಲಟ್ಟಿಸಿ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ.
·         ತಯಾರಿಸಿರುವ ಬಿಸ್ಕತ್ನ್ನು ಒವನ್ನಲ್ಲಿ 150 ಡಿಗ್ರಿ ಸೆಲ್ಸಿಯಸ್ ತಾಪದಲ್ಲಿ 20-30 ನಿಮಿಷ ಬೇಯಿಸಿ.
ರುಚಿಯಾದ ಆರೋಗ್ಯಕರವಾದ ಬಿಸ್ಕತ್ ತಿನ್ನಲು ರೆಡಿ.
                                                                                                                                ಡಾ.ಸುಮಾ ಸಂಜೀವ ಕೆ