ಮನೆಮದ್ದು


ತಲೆಹೊಟ್ಟಿನ ಸಮಸ್ಯೆಗೆ ಪರಿಹಾರ:-

     ಮೊನ್ನೆ ಕೆಲವರು ಕೇಳುತ್ತಿದ್ದರು ತಲೆಹೊಟ್ಟಿನ  ಸಮಸ್ಯೆಗೆ ಏನು ಮಾಡೊದು ಅಂತಾ? ತಲೆಹೊಟ್ಟಿನ ನಿವಾರಣೆ ಮಾಡಿಕೊಳ್ಳುವದು ತುಂಬಾ ಸುಲಭವಾಗಿದೆ.

ಕೊಬ್ಬರಿಎಣ್ಣೆಯಲ್ಲಿ ನಿಂಬೆಹಣ್ಣಿನ ರಸವನ್ನು ಸೇರಿಸಿ ತಲೆಗೂದಲಿನ ಬುಡಕ್ಕೆ ಹಚ್ಚಿ 15-20 ನಿಮಿಷ ಬಿಟ್ಟು ಸೀಗೆಪುಡಿಯಿಂದ ಅಥವಾ ನ್ಯಾಚುರಲ್ ಶಾಂಪುವಿನಿಂದ ತಲೆಸ್ನಾನ ಮಾಡುವದರಿಂದ ತಲೆಹೊಟ್ಟು ಕಡಿಮೆಯಾಗುತ್ತಾ ಬರುತ್ತದೆ. ಮತ್ತು ಬದಾಮಿ ಎಣ್ಣೆಯೊಂದಿಗೆ ನೆಲ್ಲಿಕಾಯಿ ರಸ ಸೇರಿಸಿ ತಲೆಗೂದಲಿಗೆ ಹಚ್ಚುವದರಿಂದ ಸಹ ತಲೆಹೊಟ್ಟನ್ನು ತಡೆಯಬಹುದಾಗಿದೆ.

ತಲೆಗೂದಲಿಗೆ ಸಾಮಾನ್ಯವಾಗಿ ನಿರಂತರವಲ್ಲದಿದ್ದರೂ, ವಾರದಲ್ಲಿ ಎರಡು ಬಾರಿ ಅಥವಾ ತಲೆಸ್ನಾನ ಮಾಡುವ ಮುನ್ನ ಚೆನ್ನಾಗಿ ಕೊಬ್ಬರಿ ಎಣ್ಣೆ, ಹರಳೆಣ್ಣೆ, ಬಾದಾಮಿ ಎಣ್ಣೆ, ಎಳ್ಳೆಣ್ಣೆಯಿಂದ ಇವುಗಳಲ್ಲಿ ಯಾವುದಾದರೊಂದು ಎಣ್ಣೆಯಿಂದ ಚೆನ್ನಾಗಿ ತಲೆಗೂದಲಿಗೆ, ತಲೆಗೂದಲ ಬುಡಕ್ಕೆ ಹಚ್ಚಿ ಮಸಾಜ್ ಮಾಡಿಕೊಳ್ಳುವದರಿಂದ, ತಲೆಹೊಟ್ಟು, ಕೂದಲು ಉದುರುವದು ಕಡಿಮೆಯಾಗುವದಲ್ಲದೆ ಕೂದಲು ಮೃದುವಾಗುತ್ತವೆ ಹಾಗೂ ಕೂದಲು ಟಿಸಿಳೊಡೆಯುವದನ್ನು(ಸ್ಪ್ಲಿಟ್ಸ್ ಹೇರ್) ತಪ್ಪಿಸಬಹುದಾಗಿದೆ.

                                                ಡಾ.ಸುಮಾ ಸಂಜೀವ ಕೆ