ದಾಸವಾಳ


"ಜಪಾ ಪುಷ್ಪಮ್ ಕೇಶವರ್ಧನಮ್" ಜಪಾಪುಷ್ಪ ಎಂದು ಸಂÌøತದಲ್ಲಿ ಕರೆಯಲ್ಪಡುವ ದಾಸವಾಳ ಆರೋಗ್ಯಕ್ಕೂ, ಸೌಂದರ್ಯಕ್ಕೂ ಕೇಶ ಸಂರಕ್ಷಣೆಗೂ ಸಹಕಾರಿ.ಬಿಳಿ,ಕೆಂಪು,ಗುಲಾಬಿ ಹಳದಿ ಮುಂತಾದ ಬಣ್ಣದ ಹೂಗಳು ಇರುತ್ತವೆ. ದಾಸವಾಳದಲ್ಲಿ ಹಲವಾರು ಪ್ರಭೇದಗಳು ಕಂಡುಬಂದರೂ ಅವುಗಳಲ್ಲಿ "ಹೈಬಿಸ್ಕಸ್ ರೋಸಾ-ಸೈನೆಸ್ಸಿಸ್" ಎಂಬುದು ಔಷಧಿ ತಯಾರಿಕೆಯಲ್ಲಿ ಮುಖ್ಯವಾಗಿ ಬಳಸಲ್ಪಡುತ್ತದೆ. ಬಿಳಿ ದಾಸವಾಳ ಶ್ರೇಷ್ಠ. ಇದು ದೊರೆಯದ ಸಂದರ್ಭಗಳಲ್ಲಿ ಕೆಂಪು ದಾಸವಾಳವನ್ನು ಉಪಯೋಗಿಸಬಹುದು.
       ದಾಸವಾಳ ಹೂವು ಹಾಗೂ ಅದರ ಎಲೆಯನ್ನು ರುಬ್ಬಿ ಕೂದಲಿನ ಬುಡಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ತಲೆಸ್ನಾನ ಮಾಡುವದರಿಂದ ಕೂದಲು ಆರೊಗ್ಯಪೂರ್ಣವಾಗಿರುತ್ತವೆ.
·         ದಾಸವಾಳ ಹೂವಿನ ರಸವನ್ನು ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಕಾಯಿಸಿ ತೈಲ ತಯಾರಿಸಿಟ್ಟುಕೊಂಡು ಪ್ರತಿದಿನ ತಲೆಗೂದಲಿಗೆ ಹಚ್ಚಿಕೊಳ್ಳುತ್ತಿದ್ದರೆ ಕೂದಲು ಉದುರುವುದು ನಿಲ್ಲುವದಲ್ಲದೇ ಕಪ್ಪಾಗಿ ಕಾಂತಿಯುವಾಗುತ್ತವೆ. ಕಣ್ಣುರಿ, ತಲೆನೋವು ಕೂಡ ನಿವಾರಣೆಯಾಗುತ್ತದೆ.
·         ಮಾಸಿಕ ಸ್ರಾವ ನಿಯಮಿತವಾಗಿ ಆಗದಿದ್ದಲ್ಲಿ ಸ್ತ್ರೀಯರು ಬಿಳಿ ದಾಸವಾಳದ ಹೂಗಳನ್ನು ತುಪ್ಪದಲ್ಲಿ ಹುರಿದು ಅದಕ್ಕೆ ಕಲ್ಲುಸಕ್ಕರೆ ಬೆರೆಸಿ ತಿನ್ನಬೇಕು.
·         ಬಿಳಿಸೆರಗಿನಿಂದ ಬಳಲುವ ಸ್ತ್ರೀಯರು ದಾಸವಾಳದ ಹೂವನ್ನು ಜೀರಿಗೆಯೊಡನೆ ನುಣ್ಣಗೆ ಅರೆದು ಅದಕ್ಕೆ ಮೊಸರು ಹಾಗೂ ಕಲ್ಲುಸಕ್ಕರೆ ಬೆರೆಸಿ ಸೇವಿಸಬೇಕು.
  • ರಕ್ತಶುದ್ಧಿಗೆ ದಾಸವಾಳ ಹೂವಿನ ರಸ ಸೇವನೆ ಒಳ್ಳೆಯದು
  • ಉರಿಮೂತ್ರ ಶಮನಕ್ಕೆ ಬಿಳಿ ದಾಸವಾಳದ ರಸಕ್ಕೆ ಕಲ್ಲುಸಕ್ಕರೆ, ಹಸುವಿನ ಹಾಲು ಬೆರೆಸಿ ಕುಡಿಯಬೇಕು.
·         ಬಿಳಿ ದಾಸವಾಳವನ್ನು ದೋಸೆಹಿಟ್ಟಿನೊಂದಿಗೆ ರುಬ್ಬಿ ದೋಸೆ ಮಾಡಬಹುದು. ರುಚಿಯಾಗುವದಲ್ಲದೆ ಆರೋಗ್ಯಕ್ಕೆ ಒಳ್ಳೆಯದು.
                        ಹೀಗೆ ಮಂದಾರ ಎಂದು ಮತ್ತೊಂದು ಹೆಸರಿನಿಂದ ಕರೆಯಲ್ಪಡುವ ಈ ಸೊಗಸಾದ ದಾಸವಾಳ ಹೂವಿನ ಬಗ್ಗೆ ಹೇಳುತ್ತಾ ಹೋದರೆ ಮುಗಿಯುವದಿಲ್ಲ. ಹೂವು ಆಹಾರದಲ್ಲಿ, ಔಷಧದಲ್ಲಿ, ಆರೋಗ್ಯದ ಕೆಲವು ಸಮಸ್ಯೆಗಳಿಗೆ ಉಪಯೋಗವಾಗುವ ಪುಷ್ಪದ ಬಳಕೆಯನ್ನು ತಿಳಿದು ಮಾಡಿದಲ್ಲಿ ಖಂಡಿತಾ ಉತ್ತಮ ಫಲಿತಾಂಶನ್ನು ಪಡೆಯುತ್ತೇವೆ.

                                                                                                        ಡಾ.ಸುಮಾ ಸಂಜೀವ ಕೆ